ಕನಸು

ಮೂಡಲ ನೇಸರನು,
ಪಡುವಣ ಸೇರುವ ಕನಸು ;
ಅಣೆಕಟ್ಟಿದ ನದಿಗೆ,
ಹರಿದು ಹೋಗುವ ಕನಸು

ದಾರಿ ತಪ್ಪಿದ ಹಕ್ಕಿಗೆ,
ಗೂಡು ತಲುಪುವ ಕನಸು ;
ಮುಗಿಯದ ಹೆಜ್ಜೆಗೆ,
ಊರ ಸೇರುವ ಕನಸು

ನಗುಹೀನ ಮೊಗಕೆ,
ನಗುವ ಬೀರುವ ಕನಸು ;
ಬಾಲಂಗೋಚಿಯ ಪಟಕೆ,
ಬಹುದೂರ ಹಾರುವ ಕನಸು

ಕನಸು ಹೊತ್ತ ಕನಸಿಗೆ
ಮಿತಿಯ ಕಡಿವಾಣವೇಕೆ?
ಬೇಲಿ ಹಾಕಲು ಕನಸಿಗೆ
ಆಗುವುದೆಂದು ನನಸು ?




ಕಾಮೆಂಟ್‌‌ ಪೋಸ್ಟ್‌ ಮಾಡಿ

2 ಕಾಮೆಂಟ್‌ಗಳು

ಚಿಂತನೆ