ಹಪಹಪಿಸುತ್ತಿರುವ ಒಡಲು
ತನ್ನ ಗುರಿಯನ್ನು ನೆನೆದು
ಅದರೊಳಗಿನ ವೇದನೆಯನ್ನು ನೆನೆದು
ನೂರೊಂದು
ನಿರೀಕ್ಷೆಯೂ ಹುಟ್ಟಿನ ಹಾದಿಯಲಿ
ಭಸ್ಮವಾಯಿತು ನಿರೀಕ್ಷೆ
ಬವಣೆಯ ಬದುಕಿನಲಿ
ಎಂದು ನನಸಾಗುವುದು ನನ್ನ ಕನಸು
ಜೀವನದುದ್ದಕ್ಕೂ ಕರಿನೆರಳ ಛಾಯೆಯಿರಲು
ಹಪಹಪಿಸುತ್ತಿರುವ ಒಡಲು
ತನ್ನ ಗುರಿಯನ್ನು ನೆನೆದು
ಅದರೊಳಗಿನ ವೇದನೆಯನ್ನು ನೆನೆದು
ಯಾವ ಪುಷ್ಪದ ಕೊಂಡಿ
ಯಾವ ದಾರದ ಪಾಲಾದವೋ
ಯಾರು ನೆಟ್ಟ ಆಲದ ಮರ
ಯಾರ ಆಶ್ರಯದ ನೆರಳಾದವೋ
ತನ್ನ ಜೀವನದ ಭಾಗ್ಯವು
ಯಾರ ಮನೆಯ ಕದ ತಟ್ಟಿದವೋ
ಹಪಹಪಿಸುತ್ತಿರುವ ಒಡಲು
ತನ್ನ ಗುರಿಯನ್ನು ನೆನೆದು
ಅದರೊಳಗಿನ ವೇದನೆಯನ್ನು ನೆನೆದು
0 ಕಾಮೆಂಟ್‌ಗಳು