ಬಾಲ್ಯದ ನೆನಪು

ಹರಿದ ಸಮವಸ್ತ್ರ, ತೂತಾದ ಜೇಬು,
ಜೇಬಿನೊಳಗೊಂದು ನಾಕಾಣೆಯ ಹುಸಿನಗು
ದಣಿದಷ್ಟು ಆಟ, ಅಮ್ಮನ ದಿಟ್ಟನೆಯ ನೋಟ
ಬಡತನದ ನೋವು, ನೋವಲ್ಲೊಂದು ನೆಮ್ಮದಿಯ ಛಾಪು
ಪ್ರತಿಯೊಂದು ಗಾಯದ ನೋವಿನೊಳಗೆ
ಕಲಿತ ಪಾಠಗಳೆಷ್ಟೋ?
ಕಾಲಚಕ್ರವು ಸರಿದವು, ವಯಸ್ಸಿನ ಪರದೆಯೊಂದಿಗೆ...
ಮರೆಯಾದವು ಬಾಲ್ಯದ ನೆನಪುಗಳು
ಗಾಯದ ಗುರುತಿನೊಂದಿಗೆ.












ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು

ಚಿಂತನೆ