ವಾಸ್ತವ

ಪರ್ವತದಿಂದ ಹರಿಯುವ ನದಿಗೇನು ತಿಳಿದಿದೆ
ತನ್ನ ಪಯಣ ಎಲ್ಲಿಗೆಂದು?
ಗಿಡದಲ್ಲಿ ಅರಳಿದ ಹೂವಿಗೇನು ತಿಳಿದಿದೆ 
ತನ್ನ ಸಮರ್ಪಣೆ ಯಾವ ದೇವರ ಪಾದಕ್ಕೆಂದು?
ಸ್ವಚ್ಛಂದವಾಗಿ ಬೀಸುವ ಗಾಳಿಗೇನು ತಿಳಿದಿದೆ
 ತನ್ನ ಚಲನೆ ಯಾವ ದಿಕ್ಕಿಗೆಂದು?
ವೈರಾಗ್ಯ, ದ್ವೇಷ, ಅಸೂಯೆ ಏತಕೆ ಮನದಲ್ಲಿ-
ಪ್ರತಿದಿನವೂ ಅಚ್ಚರಿ ಕಾದಿರುವ ಈ ಬದುಕಿಗೇನು ತಿಳಿದಿದೆ
 ತನ್ನ ಭವಿಷ್ಯ ಎತ್ತ ಸಾಗುವುದೆಂದು?




ಕಾಮೆಂಟ್‌‌ ಪೋಸ್ಟ್‌ ಮಾಡಿ

1 ಕಾಮೆಂಟ್‌ಗಳು

ಚಿಂತನೆ