ವಿದ್ಯಾದೇಗುಲ

ಸುಜ್ಞಾನದ ದೀವಿಗೆಯು ಕಂಗೊಳಿಸುತ್ತಿರಲು,
ಕೈ ಬೀಸಿತು ಬೆಳಕು ತನ್ನಯ ಹೊಸಲಿಗೆ ಬರಲು
ಶಿರವ ತಗ್ಗಿಸಿ, ಕರವ ಜೋಡಿಸಿ -
 ಜ್ಞಾನವ ಅರಸಿ ಬಂದ ಯಾತ್ರಿಕರು ನಾವು!

ನೂರಾರು ಕನಸಿನ ಪುಸ್ತಕವ ಹೆಗಲೇರಿಸಿ,
ಆತ್ಮವಿಶ್ವಾಸದ ಸಮವಸ್ತ್ರ ಧರಿಸಿ,
ನವ ಗೆಳೆತನದ ಜಡೆಯ ಹೆಣೆಸಿ,
ಹೊಸದೊಂದು ಚೇತನದೊಂದಿಗೆ ಪುಟ್ಟ ನಗುವಿನೊಂದಿಗೆ -
ಜ್ಞಾನವ ಅರಸಿ ಬಂದ ಯಾತ್ರಿಕರು ನಾವು !

ಗೆಳೆತನದ ಉಯ್ಯಾಲೆಯಲಿ ತೇಲಾಡಿ,
ಸಾವಿರ ನೆನಪಿನ ಗೋಪುರ ಕಟ್ಟಿಸಿ,
ತುಸು  ಮುನಿಸಿನ ಮೊಗವ ಅರಳಿಸಿ,
ಮತ್ತದೇ ನಿರೀಕ್ಷೆಯೊಂದಿಗೆ ಕಣ್ಣಂಚಿನ ಕಣ್ಣೀರಿನೊಂದಿಗೆ -
ನೆನಪುಗಳ ಹೊತ್ತು ತಂದ ಯಾತ್ರಿಕರು ನಾವು!

ವಿದ್ಯೆಯ ಧಾರೆಯೆರೆದ ಶಿಕ್ಷಕರ ನೆನೆದು,
ಜೊತೆಜೊತೆಯಾದ ಸಹಪಾಠಿಗಳ ವಂದಿಸಿ,
ನೆನಪುಗಳ ಹೊತ್ತು ತಂದ ಯಾತ್ರಿಕರು ನಾವು !
ಕಲಿತ ವಿದ್ಯಾಲಯಕ್ಕೆ ಚಿರಋಣಿ ಎಂದೆಂದೂ...



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು

ಚಿಂತನೆ