ನೆರಳು

 ಮುಗಿಲೆತ್ತರದ ವೃಕ್ಷದ ನೆರಳಿನಲಿ
ಆಶ್ರಯ ಪಡೆದ ಜೀವಗಳೆಷ್ಟೋ?
ಮುಚ್ಚಿಟ್ಟ ಸಾಗರ ತೀರದಲಿ
ಬಚ್ಚಿಟ್ಟ ಮುತ್ತಿನ ಚಿಪ್ಪುಗಳೆಷ್ಟೋ?
ಭಾವನೆಯ ಹೆಜ್ಜೆ ಗುರುತಿನಲ್ಲಿ
ನೆರಳಿಗೆ ನೆರಳಾದ ಕಥನವಿದು!

ಪಾವನ ತೀರ್ಥ ಗಂಗಾಜಲದಿ
ಮಿಂದು ಹೋದ ಪಾಪಗಳೆಷ್ಟೋ ?
ಹನಿಗೂಡಿದ ಮಳೆ ಇಬ್ಬನಿಯಲ್ಲಿ
ಹರಿದು ಹೋದ ಭಾಷ್ಪಗಳೆಷ್ಟೋ?
ನಿಶಾಚರವಾದ ಮಾಯಾ ಜಗತ್ತಿನಲ್ಲಿ
ನೆರಳಿಗೆ ನೆರಳಾದ ಕಥನವಿದು!

ಸ್ವಂತಿಕೆಯ ಬಿಟ್ಟು ತನ್ನತನವ ಮರೆತು
ಜೊತೆಗೂಡಿದ ಜೀವ ಚೈತನ್ಯದ ಎದುರು
ನಮ್ಮ ನೋವಿಗೆ ನೆರಳಾದವರೆಷ್ಟು?
ನಾವು ಇತರರಿಗೆ ನೆರಳಾದೆವೆಂದು?







ಕಾಮೆಂಟ್‌‌ ಪೋಸ್ಟ್‌ ಮಾಡಿ

3 ಕಾಮೆಂಟ್‌ಗಳು

ಚಿಂತನೆ