ಬರಿದಾಯಿತು ಪ್ರಕೃತಿಯ ಹಸಿರುಸೀರೆಯ ಹೊಳಪು,
ಕುಡಿದಾಯಿತು ನೀರು ಅಂತರ್ಜಲವ ಕೊರೆದು-
ಕ್ಷಮಾಧಾತ್ರಿಯಾದೆ ನೀನು ಇವೆಲ್ಲವ ಮರೆತು.
ವಿಷಗಾಳಿಯು ಹರಡಲು ಕಾರ್ಖಾನೆಯ ಬಿಲದಿ,
ಕಸರಾಶಿಯ ಸುರಿಯರು ಜಲಮೂಲದ ತಟದಿ,
ವೃಕ್ಷಕುಲವು ನಶಿಸಲು ಮಾನವನ ಹಠದಿ-
ಕ್ಷಮಾಧಾತ್ರಿಯಾದೆ ನೀನು ಇವೆಲ್ಲವ ಮರೆತು.
ನೀರ ಮೂಲವನ್ನೇ ತಿರುಗಿಸಿದರೂ,
ಮಣ್ಣಿನ ಫಲವತ್ತತೆಯ ಕೆಡಿಸಿದರೂ,
ಪರಿಸರದ ಸಮತೋಲನೆಯ ಕಡಿದರೂ-
ಕ್ಷಮಾಧಾತ್ರಿಯಾದೆ ನೀನು ಇವೆಲ್ಲವ ಮರೆತು.
ಬೆಳಕಿನ ಹಿಂದೆ ನಿಶೆಯ ಛಾಯೆಯಿರಲು,
ಆನಂದದ ಛಾವಣಿಯಲಿ ನೋವಿನ ಬಿರುಕಿರಲು,
ಕ್ರಿಯೆಗೆ ವಿರುದ್ಧವಾದ ಪ್ರತಿಕ್ರಿಯೆಯಿರಲು,
ಅರ್ಥೈಸುವನೆಂದು ಮನುಜ ಈ ಕಠೊರ ಸತ್ಯವ-
ನೀನು ಕ್ಷಮಾಧಾತ್ರಿಯೂ ಹೌದು!
ಸೇಡಿನ ಜ್ವಾಲಾಮುಖಿಯೂ ಹೌದು!
1 ಕಾಮೆಂಟ್‌ಗಳು
Beautiful ❤
ಪ್ರತ್ಯುತ್ತರಅಳಿಸಿ